ಆ್ಯಂಟಿಗುವಾ: 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ನಲ್ಲಿ ಇಂದು ಯಶ್ ಧುಳ್ ನಾಯಕತ್ವದ ಭಾರತ ತಂಡಕ್ಕೆ 190 ರನ್ ಗುರಿ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ 44.5 ಓವರ್ನಲ್ಲಿ ಇಂಗ್ಲೆಂಡ್ 189 ರನ್ಗೆ ಆಲೌಟ್ ಆಯಿತು. ಸಂಘಟಿತ


ಬೌಲಿಂಗ್ ದಾಳಿ ನಡೆಸಿದ ಭಾರತದ ಬೌಲರ್ಗಳು ಇಂಗ್ಲೆಡನ್ನು ಕಟ್ಟಿ ಹಾಕಿತು. ಭಾರತದ ಪರ ರಾಜ್ ಬಾವ 9.5 ಓವರ್ಗಳಲ್ಲಿ 31 ರನ್ಗೆ 5 ವಿಕೆಟ್ ಉರುಳಿಸಿದರು.ರವಿ ಕುಮಾರ್ 9 ಓವರ್ಗಳಲ್ಲಿ 34 ರನ್ ನೀಡಿ 4 ವಿಕೆಟ್ ಕಬಳಿಸಿದರು. ಇಂಗ್ಲೆಂಡ್ ಪರ ಏಕಾಂಗಿ ಹೋರಾಟ ನಡೆಸಿದ ಜೇಮ್ಸ್ ರಿಯೂ 95 ರನ್ ಗಳಿಸಿದರು. ನಾಲ್ಕು ಬಾರಿಯ ವಿಶ್ವ ಚಾಂಪಿಯನ್ ಭಾರತದ ಯುವಪಡೆಯು ಮತ್ತೊಂದು ಬಾರಿ ಕಿರೀಟ ಧರಿಸುವ ತವಕದಲ್ಲಿದೆ.ಇಲ್ಲಿಯ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತಿರುವ ಫೈನಲ್ನಲ್ಲಿ ಭಾರತದ ಯುವ ಪಡೆ ಅತ್ಯುತ್ತಮ ಬೌಲಿಂಗ್ ಮತ್ತು ಫೀಲ್ಡಿಂಗ್ ಮೂಲಕ ಗಮನ ಸೆಳೆಯುತು.