ಆ್ಯಂಟಿಗುವಾ: 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ನಲ್ಲಿ ಇಂದು ಯಶ್ ಧುಳ್ ನಾಯಕತ್ವದ ಭಾರತ ತಂಡವು ಇಂಗ್ಲೆಂಡ್ ಎದುರು ಸೆಣಸಲಿದೆ. ನಾಲ್ಕು ಬಾರಿಯ ವಿಶ್ವ ಚಾಂಪಿಯನ್ ಭಾರತದ ಯುವಪಡೆಯು ಮತ್ತೊಂದು ಬಾರಿ ಕಿರೀಟ ಧರಿಸುವ
ತವಕದಲ್ಲಿದೆ.ಇಲ್ಲಿಯ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಸೆಮಿಫೈನಲ್ನಲ್ಲಿ ಶತಕ ಬಾರಿಸಿದ ಯಶ್ ಮತ್ತು 94 ರನ್ ಗಳಿಸಿದ ಶೇಖ್ ರಶೀದ್ ಆಸ್ಟ್ರೇಲಿಯಾ ವಿರುದ್ಧ ಜಯದ ತಂದು ಕೊಟ್ಟಿದ್ದರು. ಬೌಲಿಂಗ್ನಲ್ಲಿ ಮಧ್ಯಮವೇಗಿ ರಾಜವರ್ಧನ್ ಹಂಗರಗೇಕರ್, ಎಡಗೈ ಬೌಲರ್ ರವಿಕುಮಾರ್ ಮತ್ತು ಸ್ಪಿನ್ನರ್ ವಿಕಿ ಓಸ್ವಾಲ್ ಅಮೋಘ ಫಾರ್ಮ್ನಲ್ಲಿದ್ದಾರೆ. ವಿಕಿ ಓಸ್ವಾಲ್ 12 ವಿಕೆಟ್ಗಳನ್ನು ಗಳಿಸಿದ್ದಾರೆ. ಇಂಗ್ಲೆಂಡ್ ತಂಡವೂ ಇತಿಹಾಸ ಬರೆಯುವ ಛಲದಲ್ಲಿದೆ. 24 ವರ್ಷಗಳ ಪ್ರಶಸ್ತಿ ಬರವನ್ನು ನೀಗಿಸುವತ್ತ ಚಿತ್ತ ನೆಟ್ಟಿದೆ. ನಾಯಕ ಟಾಮ್ ತಂಡವನ್ನು ಮುನ್ನಡೆಸಿದ್ದಾರೆ. ಅಲ್ಲದೇ 292 ರನ್ಗಳನ್ನೂ ಗಳಿಸಿದ್ದಾರೆ. ತಂಡದ ಎಡಗೈ ಮಧ್ಯಮವೇಗಿ ಜೊಶುವಾ ಬಾಯ್ಡೆನ್ 13 ವಿಕೆಟ್ಗಳನ್ನು ಗಳಿಸಿದ್ದಾರೆ.