ಸುಳ್ಯ: ಸುಳ್ಯದ ಬಿಜೆಪಿಯ ಹಿರಿಯ ಮುಖಂಡ ಉಮೇಶ್ ವಾಗ್ಲೆಯವರು ಇಂದು ನಿಧನರಾಗಿದ್ದಾರೆ. ಪಾರ್ಥಿವ ಶರೀರವನ್ನು ಆಸ್ಪತ್ರೆಯಿಂದ ಸುಳ್ಯದ ಕೆವಿಜಿ ಪುರಭವನಕ್ಕೆ ತರಲಾಗುವುದು. ಅಪರಾಹ್ನ 3.30ರವರೆಗೆ ಕೆವಿಜಿ ಪುರಭವನದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುವುದು. ಬಳಿಕ ಮೆರವಣಿಗೆಯ ಮೂಲಕ ಅವರ ಮನೆಗೆ ತರಲಾಗುವುದು. ಮನೆಯಲ್ಲಿ ವಿಧಿ ವಿಧಾನಗಳು ನಡೆದ ಬಳಿಕ ಕೇರ್ಪಳ ಹಿಂದೂ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ. ಮೆರವಣಿಗೆ ನಡೆಯುವ ಸಂದರ್ಭದಲ್ಲಿ ನಗರದ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಮೃತರಿಗೆ ಗೌರವ ಸೂಚಿಸಬೇಕು ಎಂದು ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ವಿನಂತಿಸಿದ್ದಾರೆ.
Advertisement
Advertisement
ಇದು ನಮ್ಮ YouTube ಚಾನೆಲ್ -
ಇಷ್ಟವಾದರೆ Subscribe ಮಾಡಿ
Advertisement