ಸುಳ್ಯ:ಇಂದು ಅಗಲಿದ ಬಿಜೆಪಿಯ ಹಿರಿಯ ಮುಖಂಡ ಉಮೇಶ್ ವಾಗ್ಲೆಯವರಿಗೆ ನೂರಾರು ಮಂದಿ ಅಂತಿಮ ನಮನ ಸಲ್ಲಿಸಿದರು. ಪಾರ್ಥಿವ ಶರೀರವನ್ನು ಕೆವಿಜಿ ಪುರಭವನದಲ್ಲಿ ಸುಮಾರು 3 ಗಂಟೆಗಳ ಕಾಲ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು. ಈ ಸಂದರ್ಭದಲ್ಲಿ ಗಣ್ಯರು ಸೇರಿ ನೂರಾರು ಮಂದಿ ಅಂತಿಮ ದರ್ಶನ ಪಡೆದರು. ಬಳಿಕ ಪಾರ್ಥಿವ ಶರೀರವನ್ನು ಪುರಭವನದಿಂದ ಮೆರವಣಿಗೆಯಲ್ಲಿ ಅವರ ಮನೆಗೆ

ತರಲಾಯಿತು. ನಗರದಲ್ಲಿ ಪಾರ್ಥಿವ ಶರೀರದ ಮೆರವಣಿಗೆ ನಡೆದ ಸಂದರ್ಭದಲ್ಲಿ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಮೃತರಿಗೆ ಗೌರವ ಸಲ್ಲಿಸಲಾಯುತು. ಬಿಜೆಪಿ ಕಚೇರಿಯ ಬಳಿಯಲ್ಲಿ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲಾಯಿತು. ಅವರ ಮನೆಯಲ್ಲಿ ವಿಧಿ ವಿಧಾನಗಳನ್ನು ನೆರವೇರಿಸಿದ ಬಳಿಕ ಮೆರವಣಿಗೆಯಲ್ಲಿ ಕೇರ್ಪಳದ ಹಿಂದೂ ರುದ್ರಭೂಮಿಗೆ ಕೊಂಡೊಯ್ದು ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಗಣ್ಯರಿಂದ ಅಂತಿಮ ದರ್ಶನ:
ಸಚಿವ ಎಸ್.ಅಂಗಾರ, ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ
ಪ್ರಧಾನ ಕಾರ್ಯದರ್ಶಿ ಹಾಗು ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ಕೆ.ವಿ.ರೇಣುಕಾಪ್ರಸಾದ್, ಬಿಜೆಪಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಡಿಸಿಸಿ ಉಪಾಧ್ಯಕ್ಷ ಎನ್.ಜಯಪ್ರಕಾಶ್ ರೈ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಜಿ.ಪಂ.ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಪ್ರಮುಖರಾದ
ಡಾ.ಲೀಲಾಧರ್ ಡಿ.ವಿ, ಡಾ.ಉಜ್ವಲ್ ಯು.ಜೆ, ಪ್ರಸನ್ನ ಕಲ್ಲಾಜೆ, ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲು, ರಜತ್ ಅಡ್ಕಾರ್, ಆರ್ಎಸ್ಎಸ್ ಮುಖಂಡರಾದ ನ.ಸೀತಾರಾಮ, ಚಂದ್ರಶೇಖರ ತಳೂರು, ಶುಭಾಶ್ವಂದ್ರ ಕಳಂಜ, ಮುಳಿಯ ಕೇಶವ ಭಟ್, ಚನಿಯ ಕಲ್ತಡ್ಕ, ಗುಣವತಿ ಕೊಲ್ಲಂತ್ತಡ್ಕ, ಭಾಗೀರಥಿ ಮುರುಳ್ಯ,ಶಾರದಾ ಶೆಟ್ಟಿ, ಪುಷ್ಪಾ ಮೇದಪ್ಪ, ಗುರುದತ್ ನಾಯಕ್, ಮಹೇಶ್ ಮೇನಾಲ, ಸುನಿಲ್ ಕೇರ್ಪಳ, ಲೋಕೇಶ್ ಕೆರೆಮೂಲೆ, ರಾಜು ಪಂಡಿತ್ ಸೇರಿದಂತೆ ನೂರಾರು ಮಂದಿ ಅಂತಿಮ ದರ್ಶನ ಪಡೆದರು.